Alerts,Status News an attempt by Civil Defence to Alert/Integrate Responders & Stake Holders.

Monday, February 16, 2015

Tumkuru : ತುಮಕೂರು ಬೆಂಕಿ ನಂದಿಸಲು ಬಂದಿದೆ ಬೈಕ್



ತಿಪಟೂರು: ಬೆಂಕಿ ಅವಘಡ ಸಂಭವಿಸಿದ ಇಕ್ಕಟ್ಟಾದ ಪ್ರದೇಶದಲ್ಲಿ ಸಲೀಸಾಗಿ ನುಗ್ಗಲು ಮತ್ತು ತುರ್ತಾಗಿ ಧಾವಿಸಿ ಆರಂಭದಲ್ಲೇ ಬೆಂಕಿ ನಿಯಂತ್ರಿಸಲು ಸುಸಜ್ಜಿತ ಬೈಕ್ ನಗರದ ಅಗ್ನಿಶಾಮಕ ಠಾಣೆಗೆ ಬಂದಿದೆ.
ಇದೇ ಪ್ರಥಮ ಬಾರಿಗೆ ಇಲ್ಲಿನ ಠಾಣೆಗೆ ಕೊಟ್ಟಿ­ರುವ ಈ ಬೈಕ್‌ನಲ್ಲಿ ಬೆಂಕಿ ನಂದಿಸಲು ಬೇಕಾದ ಉಪ­ಕರಣಗಳನ್ನು ಜೋಡಿಸಲಾಗಿದೆ.ಮಿಸ್ಟ್ ಎಂಬ ನೂತನ ತಾಂತ್ರಿಕತೆ ಇರುವುದು ಬೈಕ್‌ನ ವಿಶೇಷ. ಅಂದಾಜು ₨ 4.5 ಲಕ್ಷ ಬೆಲೆಯ ಬೈಕ್ ಸೈರನ್, ನೀರಿನ ಟ್ಯಾಂಕರ್, ಅಗ್ನಿ ಶಾಮಕ ಸಿಲಿಂಡರ್ ಒಳಗೊಂಡಿದೆ.ಹತ್ತು ಲೀಟರ್ ನೀರು ಸಂಗ್ರಹದ ಎರಡು ಟ್ಯಾಕರ್ ಹಾಗೂ 5 ಕೆ.ಜಿ. ಸಿಲಿಂಡರ್ ಇವೆ.
ಸಣ್ಣ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಹಾಗೂ ಅಗ್ನಿಶಾಮಕ ದಳದ ದೊಡ್ಡ ವಾಹನಗಳು ತೆರಳಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಇದನ್ನು ಬಳಸಲು ವಿನ್ಯಾಸ ಮಾಡಲಾಗಿದೆ ಎಂದು ಅಗ್ನಿ ಶಾಮಕ ಠಾಣಾಧಿಕಾರಿ ಜಿ.ಬಿ.ಸೋಮ­ಶೇಖರಯ್ಯ ತಿಳಿಸಿದ್ದಾರೆ.
http://www.prajavani.net/article/%E0%B2%AC%E0%B3%86%E0%B2%82%E0%B2%95%E0%B2%BF-%E0%B2%A8%E0%B2%82%E0%B2%A6%E0%B2%BF%E0%B2%B8%E0%B2%B2%E0%B3%81-%E0%B2%AC%E0%B2%82%E0%B2%A6%E0%B2%BF%E0%B2%A6%E0%B3%86-%E0%B2%AC%E0%B3%88%E0%B2%95%E0%B3%8D
Google Translate..
The fire killed break easily and quickly rushed to the area to narrow paved bike control the fire at the city's fire station.This is the first time the equipment needed to extinguish the fire station and given that this bike is a bike Special jodisalagidemist a new technology. The estimated price of ₨ 4.5 million bike siren, water tankers, fire water storage cylinder olagondidehattu two tyakar and 5 kg There cylinder.
Happened in the case of a small amount of fire and the fire department is a vehicle that has been designed to use it in places where it can not get to the fire station jibisomasekharayya said.