Alerts,Status News an attempt by Civil Defence to Alert/Integrate Responders & Stake Holders.

Monday, February 16, 2015

F/C NO:- 249/2015..DATE :- 16-02-2015.. T.O.C :- 21:58Hrs.. ADDRS:- Shikari palya, electronics city, B'lore... N.O.F:-house fire.V.T.O :- 01W/T fromECFS Sent to spot...

ಬೆಂಗಳೂರುನಗರದಲ್ಲಿ ಐದು ಕಡೆ ಬೆಂಕಿ ಅವಘಡ

ಬೆಂಗಳೂರು,ಫೆ.16- ನಗರದಲ್ಲಿ ಐದು ಕಡೆ ಬೆಂಕಿ ಅವಘಡಗಳು ಸಂಭವಿಸಿ ವಾಹನಗಳು ಹಾಗೂ ಬಟ್ಟೆಗಳು ಅಗ್ನಿಗಾಹುತಿಯಾಗಿವೆ. 
ಹುಳಿಮಾವು: ಕೊತ್ತನೂರು ರಸ್ತೆಯ ವಿನಾಯಕಲೇಔಟ್‌ನ ಖಾಲಿ ನಿವೇಶನದಲ್ಲಿ ನಿಲ್ಲಿಸಿದ್ದ  ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾಗಶಃ ಸುಟ್ಟಿದೆ.  ರಾತ್ರಿ 8.30ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ಸುಬ್ರಹ್ಮಣ್ಯನಗರ: ಇಲ್ಲಿನ ಅಂಬಾ ಭವಾನಿ ಬಡಾವಣೆಯ 2ನೇ ಬ್ಲಾಕ್‌ನಲ್ಲಿ  ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ದುಷ್ಕರ್ಮಿಗಳು ರಾತ್ರಿ 9.30ರಲ್ಲಿ ಬೆಂಕಿ ಹಬ್ಬಿದ್ದು, ವಾಹನಗಳು ಭಾಗಶಃ ಸುಟ್ಟು ಹಾಳಾಗಿದೆ.  
ಸಿ.ಕೆ.ಅಚ್ಚುಕಟ್ಟು: ಕತ್ತರಿಗುಪ್ಪೆಯ ವಿನಾಯಕ ಲೇಔಟ್, 5ನೇ ಮುಖ್ಯರಸ್ತೆಯಲ್ಲಿ ಬೆಳಗಿನ ಜಾವ 1.30ರಲ್ಲಿ ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್‌ಗಳು ಬೆಂಕಿಗಾಹುತಿಯಾಗಿವೆ.

ಜಯನಗರ: ಜಯನಗರದ 4ನೇ ಬ್ಲಾಕ್, ವಾಟರ್ ಟ್ಯಾಂಕ್ ಬಳಿಯ ಬಟ್ಟೆ ಅಂಗಡಿಯಲ್ಲಿ ಬೆಳಗಿನಜಾವ 4.15ರಲ್ಲಿ ಬೆಂಕಿ ಕಾಣಿಸಿಕೊಂಡಿದೆ.  ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದವರು ಬೆಂಕಿಯನ್ನು ನೋಡಿ ತಕ್ಷಣ ಅಗ್ನಿಶಾಮಕ್ಕೆ ತಿಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಮೂರು ವಾಹನಗಳೊಂದಿಗೆ ಬಂದು ಬೆಂಕಿ ನಂದಿಸಿದ್ದಾರೆ. ಬೆಂಕಿಯಿಂದಾಗಿ ಅಂಗಡಿಯಲ್ಲಿದ್ದ ಅಪಾರ ಬೆಲೆಯ  ಬಟ್ಟೆಗಳು ಸುಟ್ಟು ಹೋಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕಲಾಸಿಪಾಳ್ಯ: ಜೆಸಿರಸ್ತೆಯ ಕಾರು ನಿಲುಗಡೆ ಸ್ಥಳದಲ್ಲಿ ಇಂದು ಬೆಳಗ್ಗೆ 10.15ರಲ್ಲಿ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಬಂದು ಬೆಂಕಿ ನಂದಿಸಿದೆ.   ಈ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


http://eesanje.com/websites/eesanje/index.php/89-bangalore-news/11481-2015-02-16-07-36-33