Alerts,Status News an attempt by Civil Defence to Alert/Integrate Responders & Stake Holders.

Monday, February 16, 2015

Bidar NDRD 13FEB2015 :: ಅಗ್ನಿ ಅನಾಹುತ, ಸ್ಫೋಟ: ಅಣಕು ಪ್ರದರ್ಶನ


ಅಗ್ನಿ ಅನಾಹುತ, ಸ್ಫೋಟ: ಅಣಕು ಪ್ರದರ್ಶನ

'ಪ್ರಜಾವಾಣಿ ವಾರ್ತೆ
Sat, 02/14/2015 - 11:16

ಬೀದರ್: ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆ ನಿಮಿತ್ತ ಅಗ್ನಿಶಾಮಕ ದಳದ ಸಿಬ್ಬಂದಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ಅಗ್ನಿ ಅನಾಹುತ, ಬಾಂಬ್ ಸ್ಫೋಟ, ಪ್ರವಾಹ, ಸುನಾಮಿ, ಹವಾಮಾನ ವೈಪರಿತ್ಯ ಕುರಿತ ಅಣಕು ಪ್ರದರ್ಶನ ನಡೆಯಿತು.

ಆಕಸ್ಮಿಕ ಅಗ್ನಿ ಅನಾಹುತ, ಬಾಂಬ್ ಸ್ಫೋಟ ಮತ್ತಿತರ ತುರ್ತು ಸಂದರ್ಭಗಳಲ್ಲಿ ಕಟ್ಟಡ ಹಾಗೂ ಇತರೆ ಸ್ಥಳಗಳಲ್ಲಿ ಸಿಕ್ಕಿ ಹಾಕಿಕೊಂಡವರ ರಕ್ಷಣೆ, ವೈದ್ಯಕೀಯ ನೆರವು, ಬೆಂಕಿ ನಿಯಂತ್ರಣ ಮತ್ತಿತರ ಸುರಕ್ಷತಾ ಕ್ರಮಗಳ ಬಗೆಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ನೈಸರ್ಗಿಕ ಹಾಗೂ ಪ್ರಕೃತಿ ವಿಕೋಪಗಳ ಬಗೆಗೆ ಸಾರ್ವಜನಿಕರು ಅರಿವು ಹೊಂದಬೇಕು. ಅವುಗಳನ್ನು ಜಾಗರೂಕತೆಯಿಂದ ಎದುರಿಸಬೇಕು ಎಂದು ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಜೈಭೀಮ ಸೋಲಾಪುರೆ ಹೇಳಿದರು.ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ. ತಿಮ್ಮಾರೆಡ್ಡಿ ಮಾತನಾಡಿದರು.

ನಗರದ ನೆಹರೂ ಕ್ರೀಡಾಂಗಣದಿಂದ ಪ್ರಮುಖ ಬೀದಿಗಳ ಮೂಲಕ ನೆಹರೂ ಕ್ರೀಡಾಂಗಣದವರೆಗೆ ವಿದ್ಯಾರ್ಥಿಗಳಿಂದ ಜನಜಾಗೃತಿ ಜಾಥಾ ನಡೆಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕೆಎಸ್‍ಆರ್‌ಪಿ, ರಾಷ್ಟ್ರೀಯ ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಪಾಲ್ಗೊಂಡಿದ್ದರು.


http://www.prajavani.net/article/%E0%B2%85%E0%B2%97%E0%B3%8D%E0%B2%A8%E0%B2%BF-%E0%B2%85%E0%B2%A8%E0%B2%BE%E0%B2%B9%E0%B3%81%E0%B2%A4-%E0%B2%B8%E0%B3%8D%E0%B2%AB%E0%B3%8B%E0%B2%9F-%E0%B2%85%E0%B2%A3%E0%B2%95%E0%B3%81-%E0%B2%AA%E0%B3%8D%E0%B2%B0%E0%B2%A6%E0%B2%B0%E0%B3%8D%E0%B2%B6%E0%B2%A8



Google Translate..
Fire, explosion, mock display

'News
Sat, 02/14/2015 - 11:16

Bidar: The National Disaster Day for the sake of reducing the fire department staff at Nehru Stadium on Friday, fire, explosion, flood, tsunami, mock demonstration took place in bad weather.

Accidents such as fires, explosions and other emergency situations, as well as other locations in the building got hakikondavara care, medical aid, fire control and other security measures have been conducted to demonstrate.

Public awareness of the need and nature of natural disasters. The Commandant of the Home Guard would deal with them carefully jaibhima solapure K helidarujilla fire officer. Timmareddi said.

Nehru Stadium, Nehru Stadium, the main streets of the city through the awareness of students held a rally. A variety of school and colleges students, KSRP, National Service Bureau, Scouts and Guides, NCC, fire department personnel involved.