Alerts,Status News an attempt by Civil Defence to Alert/Integrate Responders & Stake Holders.

Monday, February 23, 2015

Karwar :: 22Feb2015 ಬೆಂಕಿ:ರೂ 60 ಲಕ್ಷ ಮೌಲ್ಯದ ಸರಕು ನಾಶ :: ಪ್ರಜಾವಾಣಿ ವಾರ್ತೆ Mon, 02/23/2015



ಕಾರವಾರ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕೊಂಕಣ ರೈಲ್ವೆ ಇಲಾಖೆಗೆ ಸೇರಿದ ಅಂದಾಜು ರೂ 60 ಲಕ್ಷ ಮೌಲ್ಯದ ಸರಕುಗಳು ಸುಟ್ಟು ಕರಕಲಾದ ಘಟನೆ ಭಾನುವಾರ ಸಂಜೆ ಹೊರವಲಯದ ಶಿರವಾಡ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
‘ಒಂದು ಟೆಂಪೊ, ಗ್ರೀಸ್‌ ತುಂಬಿದ 35 ಬ್ಯಾರೆಲ್‌ಗಳು, ಹೊಸ ಮತ್ತು ಹಳೆಯ ಟೈರ್‌ಗಳು, ರಬ್ಬರ್‌ ತುಂಡುಗಳು, ಕೇಬಲ್‌ ಸೇರಿದಂತೆ ಇತರೆ ವಸ್ತುಗಳು ಸುಟ್ಟುಹೋಗಿವೆ. ಘಟನೆಯಿಂದ ರೈಲು ಸಂಚಾರಕ್ಕೂ ಅಡಚಣೆಯಾಗಿಲ್ಲ’ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ರೈಲು ನಿಲ್ದಾಣದಿಂದ ತುಸು ದೂರದಲ್ಲಿರುವ ಇಲಾಖೆಯ ತಾಂತ್ರಿಕ ವಿಭಾಗದ ಕಚೇರಿಯ ಆವರಣದಲ್ಲಿ ಈ ಸರಕುಗಳನ್ನು ಇಡಲಾಗಿತ್ತು. ಅಲ್ಲಿದ್ದ ಬ್ಯಾರೆಲ್‌ನಿಂದ ಗ್ರೀಸ್‌ ಸೋರಿಕೆಯಾಗಿದ್ದು, ಇದರ ಸಮೀಪ ರೈಲು ಹಳಿಯ ಜಂಕ್ಷನ್‌ವರೆಗೆ ಜೋಡಿಸಿದ್ದ ವಿದ್ಯುತ್‌ ತಂತಿಯಿಂದ ಶಾರ್ಟ್‌ ಸರ್ಕಿಟ್‌ ಉಂಟಾಗಿ, ಬೆಂಕಿ  ಹರಡಿರಬಹುದು ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ನಾಲ್ಕು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.

Karwar: accident, fire, estimated at Rs 60 lakh worth of goods belonging to the Konkan Railway charred incident happened Sunday evening near a railway station on the outskirts of siravada.

'A Tempo, 35 barrels are filled with grease, new and old tires, rubber sticks, and other materials are burned cable. Although the train sancarakku obstacle that the railway sources said.

The train station is a little far from the Technical Division of the Department of goods were kept in the office premises. Barrel had leaked grease, electrical wire attached to its junction near the train tracks, causing a short circuit, known as They spread the fire.

Fire department personnel to carry out the operation of up to four hours, the fire unscathed.



ಕಾರವಾರ, ಫೆ. 23: ಉತ್ತರ ಕನ್ನಡ ಜಿಲ್ಲೆ ಕಾರವಾರದ ಶಿರವಾಡದಲ್ಲಿನ ಕೊಂಕಣ ರೈಲ್ವೆಗೆ ಸೇರಿದ ಗೋಡೌನ್ ಗೆ ಆಕಸ್ಮಿಕ ಬೆಂಕಿ ತಗುಲಿ 60 ಲಕ್ಷ ರೂ. ಹಾನಿಯಾಗಿದೆ.
ಗೋದಾಮಿನಲ್ಲಿದ್ದ 35 ಬ್ಯಾರಲ್ ಗ್ರೀಸ್, ರೇಲ್ವೆಯೊಳಗೆ ಅಳವಡಿಸುವ ಉಪಕರಣಗಳು, ಟೆಂಪೋ ಮತ್ತು ತೈಲಗಳು ಬೆಂಕಿಗೆ ಆಹುತಿಯಾಗಿವೆ. ಇದ್ದಕ್ಕಿದ್ದಂತೆ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಜನ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ.[ಹೊತ್ತಿ ಉರಿದ ಕರಾವಳಿ ಕಾವಲು ಪೊಲೀಸ್‌ ಪಡೆ ದೋಣಿ]

ರಾತ್ರಿಯೆಲ್ಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗಳು ಮುಗಿಲೆತ್ತರಕ್ಕೆ ಚಾಚಿಕೊಂಡಿದ್ದರಿಂದ ಜನ ಭಯಭೀತರಾಗುವಂತೆ ಮಾಡಿತು.

ಅಗ್ನಿ ಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಮೇಲ್ನೋಟಕ್ಕೆ ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರಿಗೆ ವರದಿ ಸಲ್ಲಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
http://kannada.oneindia.com/news/karnataka/karvar-indian-railways-warehouse-catches-unexpected-fire-092031.html

Karwar, Fe. 13: Uttara Kannada district of the Konkan Railway from Karwar siravadadallina godaun picked up 60 lakh to an accidental fire. Damaged.
Godaminallidda 35 barrels of Greece, relveyolage the installation of the equipment, fire ahutiyagive tempo and oils. All of a sudden the fire occurred on Sunday night. Police and firefighters were aware of the news as soon as there should be. [Kindled fueled the Police Coast Guard boat]

The operation of the fire department had to struggle to make the night a fire nandisiddare staff. Mugilettarakke kennaligegalu bhayabhitaraguvante cacikondiddarinda of the fire.
Outwardly, said that due to the short circuit fire damage. To investigate this issue to be submitted to the railway officials said.