Alerts,Status News an attempt by Civil Defence to Alert/Integrate Responders & Stake Holders.

Monday, April 6, 2015

Chilli Lorry on fire, Villages ::: Apr 04, 2015 ::ಮೆಣಸಿನಕಾಯಿ ಲಾರಿಗೆ ಬೆಂಕಿ: ಊರು ತುಂಬಾ ಘಾಟು


ಮೆಣಸಿನಕಾಯಿ ಲಾರಿಗೆ ಬೆಂಕಿ: ಊರು ತುಂಬಾ ಘಾಟು

ಎಚ್‌.ಡಿ.ಕೋಟೆ: ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ಮೆಣಸನ್ನು ಹೊತ್ತೂಯ್ಯುತ್ತಿದ್ದ ಲಾರಿಗೆ ಬೆಂಕಿ ತಗುಲಿದ್ದು, ಸುಮಾರು 20 ಲಕ್ಷ ರೂ. ಮೌಲ್ಯದ ಮೆಣಸಿನಕಾಯಿ ಭಸ್ಮವಾಗಿದೆ. ಜತೆಗೆ, ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ಮೆಣಸಿನ ಘಾಟು ವಾಸನೆ ಗ್ರಾಮಸ್ಥರ ಬೆಳಗಿನ ಸವಿ ನಿದ್ದೆಯನ್ನು ಹಾಳು ಮಾಡಿತು.

ಶುಕ್ರವಾರ ರಾತ್ರಿ ಸುಮಾರು 10 ಟನ್‌ಗಳಷ್ಟು ಮೆಣಸನ್ನು ಹೇರಿಕೊಂಡು ಹೊರಟಿದ್ದ ಲಾರಿ (ಕೆಎಲ್‌-11 ವಿ 1137) ಕೊಡಗಿನ ಗೋಣಿಕೊಪ್ಪಲಿನಿಂದ ಎಚ್‌.ಡಿ.ಕೊಟೆ ಮಾರ್ಗವಾಗಿ ತಮಿಳುನಾಡಿನ ಗೂಡಲೂರಿಗೆ ಪ್ರಯಾಣಿಸುತ್ತಿತ್ತು. ಮುಂಜಾವು ಸರಿ ಸುಮಾರು 4 ಗಂಟೆ ವೇಳೆಗೆ ಹೊಮ್ಮರಗಳ್ಳಿ ಬಳಿ ಬರುತ್ತಿದ್ದಂತೆ ಬ್ಯಾಟರಿಯಿಂದ ಕಿಡಿ ಸಿಡಿಯುತ್ತಿದ್ದುದನ್ನು ಕನ್ನಡಿ ಮೂಲಕ ಚಾಲಕ ಅಸ್ಲಾಂ ಗಮನಿಸಿದ. ತಕ್ಷಣವೇ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ, ಕ್ಲೀನರ್‌ ಜತೆ ಅನತಿ ದೂರದಲ್ಲಿ ನಿಂತುಕೊಂಡ. ಆದರೆ, ಆ ವೇಳೆಗಾಗಲೇ ಕಿಡಿ ಡೀಸೆಲ್‌ ಟ್ಯಾಂಕ್‌ಗೆ ತಗುಲಿ, ಲಾರಿಯಲ್ಲಿದ್ದ ಮೆಣಸಿಗೂ ಹೊತ್ತಿಕೊಂಡಿತ್ತು.

ದೂರದಲ್ಲಿ ಬೆಂಕಿ ನೋಡಿ, ಗ್ರಾಮದ ನಾಯಿಗಳು ಬೊಬ್ಬಿರಿಯತೊಡಗಿದವು. ನಾಯಿಗಳ ಕಿರುಚಾಟ ಕೇಳಿ ಗಾಢ ನಿದ್ದೆಯಲ್ಲಿ ಮಲಗಿದ್ದ ಹೊಮ್ಮರಗಳ್ಳಿಯ ನಿವಾಸಿಗಳು ಎದ್ದು ಬಂದರು. ಇದೇ ವೇಳೆ, ದೂರದಿಂದ ಮೂಗಿಗೆ ಘಾಟು ವಾಸನೆ ಬರುತ್ತಿದ್ದು, ಕಿರಿ ಕಿರಿ ಅನುಭವಿಸುವಂತಾಯಿತು. ಈ ಮಧ್ಯೆ, ಸಮೀಪದಲ್ಲಿಯೇ ಊರು ಇರುವುದನ್ನು ಗಮನಿಸಿದ ಚಾಲಕ, ನಿವಾಸಿಗಳಿಗೆ ದುರ್ಘ‌ಟನೆಯ ಮಾಹಿತಿ ನೀಡಿದ. ಆದರೆ, ಮೆಣಸಿನ ಘಾಟು ವಾಸನೆಯಿಂದಾಗಿ ಬೆಂಕಿ ನಂದಿಸಲು ಯಾರಿಗೂ ಸಾಧ್ಯವಾಗಲಿಲ್ಲ.

ಕೇರಳದ ಕಣ್ಣೂರು ಮೂಲದ ಉದ್ಯಮಿಯೊಬ್ಬರಿಗೆ ಸೇರಿದ ಲಾರಿ ಇದಾಗಿದೆ. ಇದರಲ್ಲಿದ್ದುದು ಎರಡನೇ ದರ್ಜೆ ಮೆಣಸಾಗಿದ್ದು, ಸುಮಾರು 20 ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದೆ. ದುರ್ಘ‌ಟನೆಯಲ್ಲಿ ಲಾರಿಯ ಹಿಂಬದಿ ಬಾಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಚಾಲಕ ಅಸ್ಲಾಂ ಮತ್ತು ಕ್ಲೀನರ್‌ಗೆ ಯಾವುದೇ ಅಪಾಯ ಸಂಭವಿಸಿಲ್ಲ. ಎಚ್‌.ಡಿ.ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.



Read more at http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF/51239/%E0%B2%AE%E0%B3%86%E0%B2%A3%E0%B2%B8%E0%B2%BF%E0%B2%A8%E0%B2%95%E0%B2%BE%E0%B2%AF%E0%B2%BF-%E0%B2%B2%E0%B2%BE%E0%B2%B0%E0%B2%BF%E0%B2%97%E0%B3%86-%E0%B2%AC%E0%B3%86%E0%B2%82%E0%B2%95%E0%B2%BF-%E0%B2%8A%E0%B2%B0%E0%B3%81-%E0%B2%A4%E0%B3%81%E0%B2%82%E0%B2%AC%E0%B2%BE-%E0%B2%98%E0%B2%BE%E0%B2%9F%E0%B3%81#2pmczj8C1fLoI0YF.99

G Translate..
Larry chili fire place is very Tabasco

HD: HD Kote taluk of Mysore district and the fire truck carrying pepper taguliddu hommaragalliyalli Friday morning, around Rs 20 lakh. Bhasmavagide worth pepper. In addition, the fire, the smell of the burning Tabasco chilli relish sleeping in the morning, destroying the villagers.

Friday night was going to be about 10 tons of pepper-imposed lorry (KL-11-V-1137) Coorg gonikoppalininda ecdikote gudalurige traveled to the state of Tamil Nadu. It was about 4 pm, at the coming of the dawn of time, the battery sparked hommaragalli sidiyuttiddudannu mirror Aslam observed by the driver. Lariyannu immediately stop the side of the road, not far from the standing with the cleaner. However, by the time the spark that picked up the diesel tank, lariyallidda hottikondittu menasigu.

See the fire in the distance, the village bobbiriyatodagidavu dogs. Ask a deep sleep slept arose, and came to the master whose dogs hommaragalliya residents. At the same time, the smell is coming from as far away as Tabasco nose, happy time. In the meantime, there are no observations of town, close to the driver, who gave information to the residents of the disaster. However, Tabasco chili odor could not be anyone to extinguish the fire.

Larry is one of the Kannur-based businessman. Idaralliddudu menasagiddu second class, there was a loss of around Rs 20 lakh. Body of the rear truck accident karakalagide completely burned. Aslam and there is no risk of the driver klinarge happened. No HD police, the investigation started.