Alerts,Status News an attempt by Civil Defence to Alert/Integrate Responders & Stake Holders.

Wednesday, March 4, 2015

Bangalore : Fire in UdayaVani Office :: ಉದಯವಾಣಿ ಕಚೇರಿಯಲ್ಲಿ ಬೆಂಕಿ ದುರಂತ



ಬೆಂಗಳೂರು:
 ಒಂದು ಕಟ್ಟಡ ಮತ್ತು ಅಲ್ಲಿರುವ ಆಸ್ತಿಯನ್ನು ಕಳ್ಳ ಕಾಕರಿಂದ ರಕ್ಷಿಸುವ ಭದ್ರತಾ ಸಿಬ್ಬಂದಿ ಸಮಯ ಬಂದರೆ ಪ್ರಾಣದ ಹಂಗು ತೊರೆದು ಅಗ್ನಿ ಅವಘಡದಂತಹ ಸಂದರ್ಭದಲ್ಲಿ ಇಡೀ ಕಟ್ಟಡ ರಕ್ಷಿಸುವ ಕೆಲಸವನ್ನೂ ಮಾಡುತ್ತಾರೆ.
ಈ ಮೇಲಿನ ಮಾತಿಗೆ ಸ್ಪಷ್ಟ ನಿದರ್ಶನವೆಂದರೆ ಮಣಿಪಾಲ್‌ ಸೆಂಟರ್‌ನ ಭದ್ರತಾ ಉಸ್ತುವಾರಿ ವಹಿಸಿಕೊಂಡಿರುವ ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿ ಸಿಬ್ಬಂದಿ.
ಸೋಮವಾರ ನಸುಕಿನಲ್ಲಿ ಮಣಿಪಾಲ್‌ ಸೆಂಟರ್‌ನ ಉದಯವಾಣಿ ಕಚೇರಿಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಹೆಚ್ಚಿನ ನಷ್ಟ ಸಂಭವಿಸದಂತೆ ರಕ್ಷಿಸಿದ್ದು ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿಯ ರಕ್ಷಣಾ ಮೇಲ್ವಿಚಾರಕ ಸಿ.ಕಾಂತದಾಸ್‌ ಮತ್ತವರ ತಂಡ.
ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಸಂಭವಿಸಿದ ಅಗ್ನಿ ಅವಘಡದ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಾಂತದಾಸ್‌ ಮತ್ತು ತಂಡ ಕೂಡಲೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ. ನಂತರ ಅಗ್ನಿ ನಂದಿಸುವ ಉಪಕರಣಗಳಿಂದ ಬೆಂಕಿ ಆರಿಸಿದ್ದಾರೆ. ಈ ಮೂಲಕ ಸಂಭವನೀಯ ಭಾರೀ ಅನಾಹುತ ತಪ್ಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಉದಯವಾಣಿ ಕಚೇರಿಗೆ ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿ ಪ್ರಧಾನ ವ್ಯವಸ್ಥಾಪಕರಾದ ಆಂಥೋನಿ ಮತ್ತು ನಾಯರ್‌ ಜತೆ ಸಿಒಒ ಎಸ್‌.ಎ.ಮುದ್ದಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿ ಸಿಓಓ ಕರ್ನಲ್‌ ಎಸ್‌.ಎ.ಮುದ್ದಯ್ಯ, ಬೆಳಗ್ಗೆ 5 ಗಂಟೆ ಸುಮಾರಿಗೆ ನಮ್ಮ ಸಿಬ್ಬಂದಿಗೆ ಉದಯವಾಣಿ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೆ ಕಾರ್ಯಪ್ರವೃತ್ತರಾದ ಅವರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಒಂದು ವೇಳೆ ಕಾಂತದಾಸ್‌ ಮತ್ತು ತಂಡ ಈ ಕಾರ್ಯ ಮಾಡದಿದ್ದರೆ ಅನಾಹುತ ಹೆಚ್ಚುವ ಸಾಧ್ಯತೆಗಳಿದ್ದವು. ನೆಟ್‌ವರ್ಕ್‌ ಡಿಟೆಕ್ಟಿವ್‌ ಏಜೆನ್ಸಿ ಸಿಬ್ಬಂದಿ ಮಾಡಿರುವ ಕೆಲಸ ಶ್ಲಾಘನೀಯ ಎಂದು ಹೇಳಿದ್ದಾರೆ.
ವಿದ್ಯುತ್‌ ನಿರ್ವಹಣಾ ಸಿಬ್ಬಂದಿಯಿಂದಲೂ ಕಾರ್ಯಾಚರಣೆ:
ಭದ್ರತಾ ಸಿಬ್ಬಂದಿಯೊಂದಿಗೆ ಸಾಹಸ ಮೆರೆದವರು ಮಣಿಪಾಲ್‌ ಸೆಂಟರ್‌ ಓನರ್ಸ್‌ ಅಸೋಸಿಯೇಷನ್‌ನ ವಿದ್ಯುತ್‌ ನಿರ್ವಹಣೆ ಮಾಡುವ ಸಿಬ್ಬಂದಿ. ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಜತೆ ಸ್ಥಳಕ್ಕಾಗಮಿಸಿದ ವಿದ್ಯುತ್‌ ನಿರ್ವಹಣಾ ಸಿಬ್ಬಂದಿ ಮೊದಲಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿ ಬರುವುದಕ್ಕೂ ಮೊದಲೇ ಮಾಡಿದ ಕಾರ್ಯಾಚರಣೆ ಬಗ್ಗೆ ಮಾತನಾಡಿರುವ ಹಿರಿಯ ವಿದ್ಯುತ್‌ ನಿರ್ವಹಣಾ ಸಿಬ್ಬಂದಿ ವರಲಕ್ಷ್ಮಣ, ಉದಯವಾಣಿ ಕಚೇರಿಯ ಒಳಗೆ ಸಂಪೂರ್ಣ ಹೊಗೆ ತುಂಬಿ ಏನೂ ಕಾಣಿಸುತ್ತಿರಲಿಲ್ಲ. ವಿದ್ಯುತ್‌ ಸಂಪರ್ಕವೂ ಇರಲಿಲ್ಲ. ಅದರ ನಡುವೆಯೇ ನೆಲದಲ್ಲಿ ತೆವಳಿಕೊಂಡು ಬಂದು ಕಿಟಕಿಗಳನ್ನು ತೆಗೆದೆವು. ಇದರಿಂದಾಗಿ ಹೊಗೆ ಹೊರಗೆ ಹೋದ ನಂತರ ಟಾರ್ಚ್‌ ಮೂಲಕ ಪರಿಶೀಲಿಸಿದಾಗ ಬೆಂಕಿ ಉರಿಯುತ್ತಿರುವುದು ಕಂಡು ಬಂತು. ಅಗ್ನಿ ನಂದಿಸುವ ಉಪಕರಣಗಳಿಂದ ಬೆಂಕಿ ನಂದಿಸಿದೆವು. ಕಚೇರಿಯ ಇಡೀ ವಿದ್ಯುತ್‌ ಸಂಪರ್ಕ ಹಾಳಾಗಿದ್ದು, ಅದನ್ನು ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ. ವರಲಕ್ಷ್ಮಣ ಅವರೊಂದಿಗೆ ವಿದ್ಯುತ್‌ ನಿರ್ವಹಣಾ ಸಿಬ್ಬಂದಿ ಹ್ಯಾರಿ ಆಲ#ನ್ಸ್‌, ಎಚ್‌.ಎಸ್‌.ಕುಮಾರ್‌, ಎಂ.ಎಸ್‌.ರಾಜ, ಜಯರಾಂ ಮತ್ತು ಜಾನ್‌ಗಿÅàನ್‌ ಕೂಡ ಬೆಂಕಿ ನಂದಿಸಿ, ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದಾರೆ.

Read more at http://www.udayavani.com/kannada/news/39229/%E0%B2%89%E0%B2%A6%E0%B2%AF%E0%B2%B5%E0%B2%BE%E0%B2%A3%E0%B2%BF-%E0%B2%95%E0%B2%9A%E0%B3%87%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%AC%E0%B3%86%E0%B2%82%E0%B2%95%E0%B2%BF-%E0%B2%A6%E0%B3%81%E0%B2%B0%E0%B2%82%E0%B2%A4#JScpBWjJ3UI6tIIG.99