Alerts,Status News an attempt by Civil Defence to Alert/Integrate Responders & Stake Holders.

Tuesday, March 10, 2015

District> Chikmagalur Sugar cane appears to be harvested from fire damage ::ಜಿಲ್ಲೆ›ಚಿಕ್ಕಮಗಳೂರು ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ: ಹಾನಿ

ಕಡೂರು: ಕಟಾವಿಗೆ ಬಂದಿದ್ದ 4 ಎಕರೆ ಕಬ್ಬು ಬೆಳೆ ಆಕಸ್ಮಿಕವಾಗಿ ಬೆಂಕಿಗೆ ಸಂಪೂರ್ಣ ಭಸ್ಮವಾದ ಘಟನೆ ತಾಲ್ಲೂಕಿನ ಬಿಳುವಾಲ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮಧ್ಯಾಹ್ನ 2 ಗಂಟೆಗೆ ಬಿಳುವಾಲದ ಕೃಷ್ಣಮೂರ್ತಿ ಅವರಿಗೆ ಸೇರಿದ 7 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು,  ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು.

ಆ ವೇಳೆಗೆ ಬಂದ ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಹತೋಟಿಗೆ ತಂದಿದ್ದು, ಅಷ್ಟು ಹೊತ್ತಿಗಾಗಲೇ ಸುಮಾರು 4 ಎಕರೆ ಕಬ್ಬು ಬೆಂಕಿಗೆ ಅಹುತಿಯಾಗಿದೆ.

ಸ್ಥಳಕ್ಕೆ ಕಂದಾಯಾಧಿಕಾರಿ ಸತ್ಯನಾರಾಯಣ್ ಮತ್ತು ಕಸಬಾ ಕೃಷಿ ಅಧಿಕಾರಿ ಲೋಕನಾಥ್ ಭೇಟಿ ನೀಡಿ ಪರಿಶೀಲಿಸಿದರು.
‘ಎರಡು ದಿನದಲ್ಲಿ ಕಬ್ಬು ಕಟಾವು ಮಾಡಲು ಸಿದ್ಧತೆ ನಡೆಸಿದ್ದ ಸಮಯದಲ್ಲಿ ಕಬ್ಬು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ನಮ್ಮ ದುರದೃಷ್ಟ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಬೆಳೆದಿದ್ದೆ.

ಈಗ ಏನು ಮಾಡುವುದು ಎಂದು ದಿಕ್ಕು ತೋಚದಂತಾಗಿದೆ. ₨4 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಬ್ಬು ಬೆಂಕಿಗೆ ಅಹುತಿಯಾಗಿದೆ’ ಕೃಷಿಕ ಕೃಷ್ಣಮೂರ್ತಿ ಅಳಲು ತೋಡಿಕೊಂಡರು.

http://www.prajavani.net/article/%E0%B2%95%E0%B2%9F%E0%B2%BE%E0%B2%B5%E0%B2%BF%E0%B2%97%E0%B3%86-%E0%B2%AC%E0%B2%82%E0%B2%A6%E0%B2%BF%E0%B2%A6%E0%B3%8D%E0%B2%A6-%E0%B2%95%E0%B2%AC%E0%B3%8D%E0%B2%AC%E0%B2%BF%E0%B2%97%E0%B3%86-%E0%B2%AC%E0%B3%86%E0%B2%82%E0%B2%95%E0%B2%BF-%E0%B2%B9%E0%B2%BE%E0%B2%A8%E0%B2%BF



District> Chikmagalur
Sugar cane appears to be harvested from fire damage
Tue, 03/10/2015

Kadur: 4 acres of sugarcane crop to be harvested from the fire accident in the event the entire bhasmava biluvala village in the taluk on Monday.

Noon and 2 pm to 7 acres of land belonging to him had grown sugar cane Good biluvalada Krishnamurthy taguliddu fire, the fire department said it had received a thing.

At the time of the fire control vehicles, brought about by the fire, the fire had already ahutiyagide nearly 4 acres of sugar cane.

Visit the official Loknat kandayadhikari Satyanarayan place and inspected the farm Kasaba.
"Preparing for two or three days to harvest sugar cane in full at the time of the fire ahutiyagiddu, to our misfortune. Make millions raised a loan of Rs.

What to do now tocadantagide that direction. ₨ 4 million more than the value of the cane fire ahutiyagide 'farmer Krishnamurthy cry now.