Alerts,Status News an attempt by Civil Defence to Alert/Integrate Responders & Stake Holders.

Wednesday, March 4, 2015

Davangere:: Nature Disaster Management Training :: ಪ್ರಕೃತಿ ವಿಪತ್ತು ನಿರ್ವಹಣಾ ತರಬೇತಿ ಶಿಬಿರ’ದಲ್ಲಿ ಎಸ್ಪಿ ಬೋರಲಿಂಗಯ್ಯ ವಿಪತ್ತು ನಿಯಂತ್ರಣಕ್ಕೆ ಮಾರ್ಗದರ್ಶನ ಅಗತ್ಯ ಪ್ರಜಾವಾಣಿ ವಾರ್ತೆ Thu, 02/26/2015



ದಾವಣಗೆರೆ: ‘ತಂತ್ರಜ್ಞಾನದ ಅರಿವು, ಸಾಮಾನ್ಯ ತಿಳಿವಳಿಕೆ ಹಾಗೂ ಸೂಕ್ತ ಮಾರ್ಗದರ್ಶನ ಇದ್ದಲ್ಲಿ ರಾಷ್ಟ್ರೀಯ ವಿಪತ್ತು ಸೇರಿದಂತೆ ಮಾನವ ನಿರ್ಮಿತ ವಿಪತ್ತುಗಳನ್ನು ಅಲ್ಪಮಟ್ಟಿಗೆ ತಡೆಗಟ್ಟಬಹುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ .ಎಂ.ಬಿ.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ ಹಾಗೂ ವಿವೇಕಾನಂದ ರೋವರ್ಸ್‌ ಕ್ರ್ಯೂ, ಕಲ್ಪನಾ ಚಾವ್ಲಾ ರೇಂಜರ್ಸ್‌ ಟೀಮ್‌ ಮತ್ತು ಯುವ ರೆಡ್‌ಕ್ರಾಸ್‌, ಕಮ್ಯುನಿಟಿ ಮೆಡಿಸಿನ್‌ ಎಸ್‌.ಎಸ್‌.ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಇವುಗಳ ಸಹಯೋಗದಲ್ಲಿ ಬುಧವಾರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ‘ಪ್ರಕೃತಿ ವಿಪತ್ತು ನಿರ್ವಾಹಣಾ ತರಬೇತಿ’ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಲಪ್ರಳಯ, ಸುನಾಮಿ, ಭೂಕಂಪ ಸೇರಿದಂತೆ ಪ್ರಕೃತಿ ವಿಪತ್ತುಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಅವುಗಳಿಂದ ಸಾಕಷ್ಟು ಆಸ್ತಿ–ಪಾಸ್ತಿ ಹಾಗೂ ಜೀವಹಾನಿ ಆಗುವ ಸಂಭವ ಹೆಚ್ಚು. ನಂತರದ ದಿನಗಳಲ್ಲಿ ವ್ಯವಸ್ಥೆಯ ಪುನರ್‌ ನಿರ್ಮಾಣ ಮಾಡುವಲ್ಲಿ ತಂತ್ರಜ್ಞಾನದ ನೆರವು ತುಂಬಾ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

‘ಜಪಾನ್‌ನಲ್ಲಿ ಭೂಕಂಪ ಹಾಗೂ ಅಣುಸ್ಥಾವರ ದುರಂತಗಳು ಸಂಭವಿಸಿದಾಗ, ಅಲ್ಲಿನ ಜನರು ಎದೆಗುಂದದೇ ತಂತ್ರಜ್ಞಾನವನ್ನು ಸದುಪಯೋಗ ಪಡೆದುಕೊಂಡು ಬಹು ಬೇಗನೆ ಪುನರ್‌ ನಿರ್ಮಾಣ ಮಾಡಿದರು’ ಎಂದು ಅವರು ಸ್ಪಷ್ಟಪಡಿಸಿದರು.

‘ಬೆಂಕಿ ಆಕಸ್ಮಿಕ, ರಸ್ತೆ ಅಪಘಾತ, ಮಳೆ ದುರಂತ ಇಂತಹ ಅವಘಡಗಳು ಸಂಭವಿಸಿದಾಗ ಸ್ಥಳೀಯರ ಸಹಕಾರ ಹಾಗೂ ಸಂಘ ಸಂಸ್ಥೆಗಳ ನೆರವು ತುಂಬಾ ಅವಶ್ಯ. ಆದರೆ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಲ್ಲಿ ಸೂಕ್ತ ತರಬೇತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ –ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ಶಿಬಿರ ಆಯೋಜಿಸುವುದು ಶ್ಲಾಘನೀಯ ಕೆಲಸ’ ಎಂದರು.

ಎಸ್.ಎಸ್‌.ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ಉಪ ಪ್ರಾಂಶುಪಾಲರಾದ ಡಾ.ಶಶಿಕಲಾ ಪಿ.ಕೃಷ್ಣಮೂರ್ತಿ ಅವರು ಮಾತನಾಡಿ, ‘ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಪ್ರತಿಯೊಬ್ಬರು ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿಯಬೇಕು’ ಎಂದು ಹೇಳಿದರು.

ಇದೇ ಸಮಯದಲ್ಲಿ ಫಿಲ್ಡ್‌ ಮಾರ್ಷಲ್‌ ಕಾರ್ಯಪ್ಪ ನೇಚರ್‌ ಅವೇರ್‌ನೆಸ್‌ ಅಂಡ್‌ ಅಡ್ವೆಂಚರ್‌ ಕ್ಲಬ್‌ ಉದ್ಘಾಟನೆ ನಡೆಯಿತು. ನಂತರ ವಿವೇಕಾನಂದ ರೋವರ್ಸ್‌ ಕ್ರ್ಯೂ, ಕಲ್ಪನಾ ಚಾವ್ಲಾ ರೇಂಜರ್ಸ್‌ ತಂಡದ ವಿದ್ಯಾರ್ಥಿಗಳಿಗೆ ಸೇರಿದಂತೆ ಇತರೆ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಗ್ನಿಶಾಮಕದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ  ರಾಷ್ಟ್ರೀಯ ವಿಪತ್ತು  ನಿರ್ವಹಣಾ ತರಬೇತಿ ನೀಡಿದರು.

ಜಿಲ್ಲಾ ಸ್ಕೌಟ್‌ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ತೂ.ಕ.ಶಂಕರಯ್ಯ, ಡಾ.ಎ.ಮಂಜಣ್ಣ, ಡಾ.ಕೆ.ನಾರಾಯಣ ಸ್ವಾಮಿ ಇತರರು ಉಪಸ್ಥಿತರಿದ್ದರು.

http://www.prajavani.net/article/%E0%B2%B5%E0%B2%BF%E0%B2%AA%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%BF%E0%B2%AF%E0%B2%82%E0%B2%A4%E0%B3%8D%E0%B2%B0%E0%B2%A3%E0%B2%95%E0%B3%8D%E0%B2%95%E0%B3%86-%E0%B2%AE%E0%B2%BE%E0%B2%B0%E0%B3%8D%E0%B2%97%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%85%E0%B2%97%E0%B2%A4%E0%B3%8D%E0%B2%AF#.

Nature Disaster Management Training sibiradalli SP Boralingaiah
It is necessary to guide disaster control
News
Thu, 02/26/2015

Bangalore: 'technological knowledge, common sense and human-made disasters, including appropriate guidance slightly does not prevent a national disaster, "said District Police Superintendent embiboralingayya.

The Government First Grade College, a master's Centre Point Rovers and Crewe, Kalpana Chawla Rangers Team and Youth Red Cross, Community Medicine, in collaboration with esesinstityut of Medical Sciences are hosted on a college campus 'natural disaster management training' camp was inaugurated.

'Flood, tsunami, earthquake, it is very difficult to control, including the nature of the disaster. They are also more likely to be due to a lot of assets, and baggage. Assistance in making the technology is very necessary to rebuild the system at a later date, "he said.

"Japan Earthquake and anusthavara tragedies happen, the people soon to be re-built edegundade technology improvement," he said.

'Fire, road accident casualties in the event of rain, the local co-op, and organizations such as disaster assistance is very much needed. However, the problems as soon as spandisuvalli need appropriate training. Measures to be taken in this regard about the school kalejugala students primarily by an admirable job in training camp, "he said.

Deputy Principal of Medical Sciences dasasikala esesinstityut pikrsnamurti said, "Everybody in the event of accidental casualties responsive attitude towards the problem. These terms should not be neglected. Everyone must learn social responsibility, "he said.

At the same time, Field Marshal AAW Nature Awareness and Adventure Club was held at the opening. After Vivekananda Crew Rovers, Rangers, a team of students of other colleges and student Kalpana Chawla, the Home Guard platoon of male agnisamakadala and the staff of the national disaster management training.

District Scout Commissioner murugharajendra cigateri, Government First Grade College Principal protukasankarayya, daemanjanna, dakenarayana Swami others.