Alerts,Status News an attempt by Civil Defence to Alert/Integrate Responders & Stake Holders.

Friday, March 6, 2015

Chitradurga, Thursday, 5 March 2015 :: ಲಾರಿಯಲ್ಲಿ ಆಕಸ್ಮಿಕ ಬೆಂಕಿ: ಮದ್ಯ ನಾಶ ಚಿತ್ರದುರ್ಗ, ಗುರುವಾರ, 5 ಮಾರ್ಚ್ 2015 :: Truck accidental fire destroyed the alcohol


ಮದ್ಯದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಲಾರಿಯಲ್ಲಿದ್ದ ಸಾವಿರಾರು ರೂಪಾಯಿಯ ಮದ್ಯ ಹಾಳಾಗಿರುವ ಘಟನೆ ನಗರದ ನಗರ ಪೊಲೀಸ್ ಠಾಣೆ ಎದುರು ಸಂಭವಿಸಿದೆ. 
 
ಮೂಲಗಳ ಪ್ರಕಾರ, ಈ ಮದ್ಯವನ್ನು ಹೊತ್ತೊಯ್ಯುತ್ತಿದ್ದ ಲಾರಿಯು ಬೆಂಗಳೂರಿನಿಂದ ಉತ್ತರ ಕರ್ನಾಟಕದ ಜಮಖಂಡಿ ಕಡೆ ಸಾಗಿತ್ತು. ಈ ಹಿನ್ನೆಲೆಯಲ್ಲಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿದ ಕಾರಣ ಲಾರಿಯಲ್ಲಿದ್ದ ಮದ್ಯವೆಲ್ಲಾ ಹಾಳಾಗಿದ್ದು, ಪರಿಣಾಮ ಸಾವಿರಾರು ರೂ.ನಷ್ಟವಾಗಿದೆ. ಘಟನೆ ತಿಳಿದ ಅಗ್ನಿಶಾಮಕ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 
ಘಟನೆಗೆ ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಆದರೆ ಮದ್ಯದ ಬಾಟಲಿಗಳ ನಡುವೆಯೇ ತಿಕ್ಕಾಟ ನಡೆದಿರುವ ಕಾರಣ ಬೆಂಕಿ ಉತ್ಪತ್ತಿಯಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. 


The fire occurred accidentally dropped lariyondaralli alcoholism, alcohol lariyallidda thousands of rupees has been damaged in the incident occurred in the city's police station.
 
According to sources, the wine-carrying truck went hand in Bangalore, Karnataka Hajin. If you ran this way in the wake of an accidental fire in Chitradurga. The cause of the fire had destroyed lariyallidda madyavella, resulting in thousands of runastavagide. Personnel must be aware of the incident, firefighters managed to put out the fire davisi.
 
Accurate information about the cause of the incident is not known. However, due to the ongoing conflict between the bottles of liquor, it is suspected that the fire originated in the casualty occurred. The city police have registered a case, the investigation continues.