Alerts,Status News an attempt by Civil Defence to Alert/Integrate Responders & Stake Holders.

Wednesday, March 4, 2015

Chikamangaluru :: ಚಿಕ್ಕಮಗಳೂರು ‘ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಅರಿವು ಇರಲಿ’ ಪ್ರಜಾವಾಣಿ ವಾರ್ತೆ Tue, 03/03/2015

ಚಿಕ್ಕಮಗಳೂರು ‘ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ಅರಿವು ಇರಲಿ’
ಪ್ರಜಾವಾಣಿ ವಾರ್ತೆ
Tue, 03/03/೨೦೧೫

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ವಿಪತ್ತು ನಿರ್ವಹಣೆಯ ಕುರಿತು ಶಿಕ್ಷಕರು ಜಾಗೃತಿ ಮೂಡಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಹೇಳಿದರು.

ನಗರದ ಮಲೆನಾಡು ಶಿಕ್ಷಣ ಸಂಸ್ಥೆ ಕಾಲೇಜು ಆವರಣದಲ್ಲಿ ಜಿಲ್ಲಾ ಗೃಹ ರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಇಂದು ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಅನಿಲ ಮತ್ತು ವಿಜ್ಞಾನ ಪ್ರಯೋಗಾಲಯಗಳಿರುವುದರಿಂದ ವಿಪತ್ತು ಎದುರಾ­ದಾಗ ಅದನ್ನು ಹೇಗೆ ತಡೆಗಟ್ಟಬೇಕು ಎಂಬ ಮಾಹಿತಿಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಅಗತ್ಯವಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಪತ್ತುಗಳ ಕುರಿತು ಮಾಹಿತಿ ನೀಡಬೇಕು. ಸ್ಥಳೀಯ ಅಗ್ನಿಶಾಮಕ ದಳ, ಆಂಬುಲೆನ್ಸ್, ಪೊಲೀಸ್ ಠಾಣೆಗಳ ಸ್ಥಳ ಮತ್ತು ದೂರವಾಣಿ ಸಂಖ್ಯೆಯನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೆರೆ ಹಾವಳಿ ಸೇರಿದಂತೆ ದೊಡ್ಡ ವಿಪತ್ತುಗಳು ನಡೆದಾಗ ವಿದ್ಯಾರ್ಥಿಗಳು ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದೊಂದಿಗೆ ಕೈಜೋಡಿಸಬೇಕು. ವಿದ್ಯಾರ್ಥಿಗಳು ಓದಿನ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದು ಅಗತ್ಯ ಎಂದರು.
ಮಲೆನಾಡು ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಎಚ್.ಎಸ್. ಅನಂತರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ವಿಪತ್ತು ನಿರ್ವಹಣೆಯ ಪ್ರಾತ್ಯಕ್ಷಿಕೆಗಳಲ್ಲಿ ಭಾಗಿಯಾದಾಗ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದರು.

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಫಣಿರಾಜ್ ಮಾತನಾಡಿ, ಪ್ರತಿ ವರ್ಷವೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅನಾಹುತಗಳಾದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ದಳದೊಂದಿಗೆ ಕೈಜೋಡಿಸಿದಾಗ ಹೆಚ್ಚಿನ ಹಾನಿ ತಡೆಯಬಹುದು ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕೃತಿಕಾ, ಶತಾ ಮತ್ತು ಕಾರ್ತಿಕ್ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರಾದ ಕಾವ್ಯ, ಹರ್ಷಿತಾ ಮತ್ತು ವರುಣ್ ವರ್ಣಿಕರ್‌ ಅವರಿಗೆ ಬಹುಮಾನ ನೀಡಲಾಯಿತು.

ಮಲೆನಾಡು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯಕುಮಾರ್, ಮಲೆನಾಡು ಶಿಕ್ಷಣ ಸಂಸ್ಥೆಯ ಕಮಿಟಿ ಸದಸ್ಯರಾದ ಶಂಕರನಾರಾಯಣ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಹಳೇ ತಾಲ್ಲೂಕು ಕಚೇರಿ ಅವರಣದಿಂದ ಎಂ.ಇ.ಎಸ್.ಶಾಲೆವರೆಗೆ ಜಾಗೃತಿ ಪಥ ಸಂಚಲನ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆ ದಳದಿಂದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
http://www.prajavani.net/article/%E2%80%98%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%B5%E0%B2%BF%E0%B2%AA%E0%B2%A4%E0%B3%8D%E0%B2%A4%E0%B3%81-%E0%B2%A8%E0%B2%BF%E0%B2%B0%E0%B3%8D%E0%B2%B5%E0%B2%B9%E0%B2%A3%E0%B3%86-%E0%B2%85%E0%B2%B0%E0%B2%BF%E0%B2%B5%E0%B3%81-%E0%B2%87%E0%B2%B0%E0%B2%B2%E0%B2%BF



The region 'for students regardless of disaster management awareness'
News
Tue, 03/03/2015

Chikmagalur: students childhood teachers awareness about disaster management should dasanjiv Additional Superintendent of Police Patil said.

The premises of the college for the education agency Highlands Home Guard Regiment, under the auspices of the fire and emergency service inaugurated on Monday by the National Disaster reduction Day.

Today is day meal scheme in schools, science labs, cooking gas and how to stop it from being a disaster when students need to know the information. Teachers Students should be informed about the risks. The local fire brigade, ambulance, police stations and the telephone number to make students understand that the advice was for all to see.

When large disasters including flooding students with the fire department and the Home Guard platoon reserved. Need to be involved in social activities like reading with students, he said.
Honorary President of the Highlands HS education agency. Anantharamaiah speaking, reading with students in disaster management presentations bhagiyadaga avoid further casualties, he said.

The Home Guard Corps commandant said phaniraj, is held every year in such a program. Home Guards and the fire department in case of disaster with students kaijodisidaga prevent further damage, he said.

Krtika essay contest winners, sata and scored the winner in the competition, poetry and painting, and Varun varnikar harsita prize was given to them.

Highlands dadiel secretary of the education agency. Vijay Kumar, a member of the Committee of the education agency Highlands Shankaranarayana Bhat and others were present.

The path of the old district office campus awareness event emiessalevarege jammed and fire and emergency service at the U students to demonstrate.
Google Translate for Business:Translator ToolkitWebsite TranslatorGlobal Market Finder
Turn off instant translationAbout Google TranslateMobileCommunityPrivacy & TermsHelpSend