Alerts,Status News an attempt by Civil Defence to Alert/Integrate Responders & Stake Holders.

Wednesday, May 6, 2015

Chitradurga cracker shop fire: the owner's death - Bangalore Majestic and fire nagarabaviyalli :: ರಾಜ್ಯದಲ್ಲಿ 3 ಕಡೆ ಅಗ್ನಿ ಅವಘಡ:: - ಚಿತ್ರದುರ್ಗದಲ್ಲಿ ಪಟಾಕಿ ಅಂಗಡಿಗೆ ಬೆಂಕಿ :ಮಾಲೀಕ ಸಾವು - ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಮತ್ತು ನಾಗರಬಾವಿಯಲ್ಲಿ ಬೆಂಕಿ

Wednesday, May 6th, 2015 
- ಚಿತ್ರದುರ್ಗದಲ್ಲಿ ಪಟಾಕಿ ಅಂಗಡಿಗೆ ಬೆಂಕಿ :ಮಾಲೀಕ ಸಾವು
- ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಮತ್ತು ನಾಗರಬಾವಿಯಲ್ಲಿ ಬೆಂಕಿ



ಚಿತ್ರದುರ್ಗ/ಬೆಂಗಳೂರು: ರಾಜ್ಯದಲ್ಲಿ ರಾತ್ರಿ ಮೂರು ಕಡೆ ಬೆಂಕಿ ಅವಘಡ ಸಂಭವಿಸಿದೆ. ಚಿತ್ರದುರ್ಗದಲ್ಲಿ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದು ಅಂಗಡಿ ಮಾಲೀಕ ಮೃತಪಟ್ಟಿದ್ದಾರೆ. ಘಟನೆಯಲ್ಲಿ ತಾಯಿ ಹಾಗೂ ತಂಗಿ ಪ್ರಾಣಾಪಯಾದಿಂದ ಪಾರಾಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಎರಡು ಕಡೆ ಅಗ್ನಿ ಅವಘಡ ಸಂಭವಿಸಿದೆ. ಮೆಜೆಸ್ಟಿಕ್ ಬಳಿಯ ಸಿಟಿ ಸೆಂಟರ್ ಶಾಪಿಂಗ್ ಮಾಲ್‍ನಲ್ಲಿ   ಶಾರ್ಟ್‌ ಸರ್ಕಿಟ್‌ ನಿಂದ ಬೆಂಕಿ ಕಾಣಿಸಿಕೊಂಡಿದ್ದು, 14 ಅಂಗಡಿಗಳು ಸುಟ್ಟು ಹೋಗಿವೆ. ಇನ್ನು ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ಗುಜರಿ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮವಾಗಿವೆ.
ಚಿತ್ರದುರ್ಗ ವರದಿ : ಚಿತ್ರದುರ್ಗ ನಗರದ ಗಾಂಧಿ ವೃತ್ತದ ಎಂ.ಆರ್. ಪಟಾಕಿ ಅಂಗಡಿಗೆ ಸಂಜೆ 7 ಗಂಟೆ ಸುಮಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿ ಕೊಂಡಿತ್ತು. ಆಗ ಮಾಲೀಕ ಸಾಯಿ ದರ್ಶನ್, ತಾಯಿ ವಿಜಯಮ್ಮ ಹಾಗೂ ತಂಗಿ ಇದ್ದರು. ವಿಷಯ ತಿಳಿದ ತಾಯಿ, ಮಗಳು ಹೊರಗೆ ಓಡಿ ಬಂದಿದ್ದಾರೆ. ಆದರೆ ಮೊದಲನೇ ಮಹಡಿಯಲ್ಲಿ ಬೆಂಕಿಯನ್ನ ನಂದಿಸಲು ಹೋದ ಸಾಯಿ ದರ್ಶನ್. ದಟ್ಟ ಹೊಗೆಯಿಂದ ಹೊರಗೆ ಬರಲು ಆಗದ ಪರಿಣಾಮ ನೂರಾರು ಜನರ ಕಣ್ಣಮುಂದೆಯೇ ಸುಟ್ಟು ಕರಕಲಾಗಿ ಹೋದರು.
ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ನಾಲ್ಕು ವಾಹನಗಳು ಹಾಗೂ ಫೋಲಿಸರು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಸುಮಾರು ನಾಲ್ಕು ಅಗ್ನಿ ಶಾಮಕ ವಾಹನಗಳು, ಸಾಕಷ್ಟು ಜನ ಪೊಲೀಸ್ ಸಿಬ್ಬಂದಿ ನಾಲ್ಕು ತಾಸುಗಳ ಕಾಲ ನಿರಂತರವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾದ್ರೂ, ಕೊನೆಗೆ ಜೆಸಿಬಿ ಬಳಸಿ ಕಟ್ಟಡವನ್ನ ಹೊಡೆದು ಕಟ್ಟಡದ ಒಳಗಿದ್ದ ಸುಟ್ಟು ಕರಕಲಾದ ಸಾಯಿ ದರ್ಶನ್ ದೇಹವನ್ನ ಹೊರ ತರಲಾಯಿತು.
ಬೆಂಗಳೂರು ವರದಿ: ಮೆಜೆಸ್ಟಿಕ್ ಬಳಿಯಿರುವ ಸಿಟಿ ಸೆಂಟರ್ ಶಾಪಿಂಗ್ ಮಾಲ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಮಾಲ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಗ್ನಿಯ ಕೆನ್ನಾಲಿಗೆಗೆ ಲಕ್ಷಾಂತರ ಮೌಲ್ಯದ ಬಟ್ಟೆ ಎಲೆಕ್ಟ್ರಿಕಲ್ ವಸ್ತುಗಳು ಸುಟ್ಟು ಭಸ್ಮವಾಗಿದೆ. ಮೇಲ್ನೋಟಕ್ಕೆ ಮಾಲ್‍ನಲ್ಲಿದ್ದ 14 ಅಂಗಡಿಗೆಳಿಗೆ ಹೆಚ್ಚು ಹಾನಿ ಅಗಿದೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಉತ್ತರವಿಭಾಗದ ಡಿಸಿಪಿ ಸುರೇಶ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿ ಮಾರ್ಕಂಡಯ್ಯ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿಯ ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಗಣೇಶ್ ಎಂಬುವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ಮೌಲ್ಯದ ಗುಜರಿ ವಸ್ತುಗಳು ಬೆಂಕಿಗೆ ಅಹುತಿಯಾಗಿದೆ.
ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ನಮ್ಮ ಅಂಗಡಿಗೆ ವಿದ್ಯುತ್ ಸಂಪರ್ಕವಿರಲಿಲ್ಲ ಅದರೂ ಹೇಗೆ ಬೆಂಕಿ ಹತ್ತಿಕೊಂಡಿದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಗುಜರಿ ಅಂಗಡಿ ಮಾಲೀಕ ಗಣೇಶ್ ಹೇಳಿದ್ದಾರೆ


G Translate..
- Chitradurga cracker shop fire: the owner's death
- Bangalore Majestic and fire nagarabaviyalli

News / In the night of the fire accidents on three sides. Chitradurga fireworks shop store owner killed in an accidental fall into the fire. Pranapayadinda mother and sister escaped the incident.
There was no casualty in the fire of the two sides. Majestic City Center shopping mall, near to the fire appeared in the short-circuiting, 14 shops burned away. Accidental fire in a scrap shop near BDA Complex no nagarabavi appeared bhasmavagive objects worth millions.
News Report: News of the circle MR Gandhi. Fireworks shop around 7 pm kondittu appeared the fire was accidental. The owner of Sai Darshan, her mother and sister were vijayamma. Knows, mother, daughter, has run out. But Sai Darshan, who went to extinguish the fire on the first floor. Let go of the effect of the thick smoke come out of the hundreds of people who went karakalagi kannamundeye burned.
Four vehicles of the fire brigade came to the place and pholisaru struggle to extinguish the fire. About four fire vehicles, a lot of people have a fire extinguisher in the work of the police staff magnaradru continuously for four hours, and finally hit the building using jesibi inside the building, brought out the charred body of Sai Darshan.
News Report: Majestic City Center shopping mall, near the mall a short sakryutninda figured out the fire. More than 10 firefighters rushed to put out the fire succeeded in vehicles. Clothing, electrical goods worth millions kennaligege bhasmavagide fire burned. Outwardly, the more damage malnallidda 14 angadigelige known versions. Police and fire brigade officer Suresh uttaravibhagada no place inspected markandayya visited.
Nagarabhaviya BDA Complex, near the city of accidental fires was seen in a scrap shop. Ganesh were worth millions of scrap scrap materials affects the appearance of fire, the fire ahutiyagide store.
Firefighters managed to put out the fire three vehicles arrived at the place. How to store electricity for samparkaviralilla yet know is that the CO₂-fire jumble store owner Ganesh said.
*********************************************

ಪ್ರತ್ಯೇಕ ಕಡೆ ಬೆಂಕಿ ಅವಘಡ: ಸಾಕಷ್ಟು ಆಸ್ತಿ ಬೆಂಕಿಗಾಹುತಿ
ಬೆಂಗಳೂರು, ಬುಧವಾರ, 6 ಮೇ 2015 (14:57 IST)
ನಗರದಲ್ಲಿ ಕಳೆದ ರಾತ್ರಿ ಎರಡು ಪ್ರತ್ಯೇಕ ಕಡೆ ಅಗ್ನಿ ಅವಘಡ ಸಂಭವಿಸಿದೆ. ಮೆಜೆಸ್ಟಿಕ್ ಬಳಿಯ ಕೆ.ಜಿ.ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿರುವ ಬಟ್ಟೆ ಹಾಗೂ ಪಕ್ಕದ ಇತರೆ ಮಳಿಗೆಗಳಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಾಕಷ್ಟು ಹಾನಿಯುಂಟಾಗಿದೆ. 
ಘಟನೆಯಿಂದ ಇಲ್ಲಿನ ಸುತ್ತಮುತ್ತಲಿನ ಮಳಿಗೆಗಳೆಲ್ಲವೂ ಕೂಡ ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣದ ಚಪ್ಪಲಿ, ಬಟ್ಟೆ ಇನ್ನಿತರೆ  ವಸ್ತುಗಳು ನಾಶವಾಗಿವೆ. ಬೆಂಕಿ ಕಾಣಿಸಿಕೊಂಡ ಬಳಿಕವೇ ಸ್ಥಳಕ್ಕಾಗಮಿಸಿದ 10ಕ್ಕೂ ಹೆಚ್ಚು ಅಗ್ನಿಶಾಮಕ ತಂಡಗಳು ಸುಮಾರು 2 ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.  
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಕಾಂಪ್ಲೆಕ್ಸ್‌ನ ಹವಾನಿಯಂತ್ರಿತ ಡಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವುದೇ ಘಟನೆಗೆ ಕಾರಣ ಎಂದಿದ್ದಾರೆ. 
ಪ್ರಕರಣದ ಹಿನ್ನೆಲೆ: ಉಪ್ಪಾರ ಪೇಟೆ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಹನುಮಂತರಾಯ ಅವರು ರಾತ್ರಿ ಗಸ್ತಿನಲ್ಲಿದ್ದರು. ಈ ವೇಳೆ ಬೆಂಕಿ ತಗುಲಿರುವುದನ್ನು ಕಂಡ ಅವರು, ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. 
ತಕ್ಷಣವೇ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ, ನಂದಿಸಲು ಮುಂದಾಗಿದ್ದಾರೆ. ಆದರೆ ಹತೋಟಿಗೆ ಬಾರದ ಕಾರಣ ಮತ್ತಷ್ಟು ಅಗ್ನಿ ಶಾಮಕ ವಾಹನಗಳನ್ನು ತರಿಸಿ ಬೆಂಕಿ ನಂದಿಸಲಾಗಿದೆ. 
ಈ ಸಂಬಂಧ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ. 
ಮತ್ತೊಂದು ಅನಾಹುತ: 
ನಗರದ ನಾಗರಭಾವಿಯ ಕೊಟ್ಟಿಗೆಪಾಳ್ಯ ಸಮೀಪ ಇರುವ ಗುಜರಿ ಅಂಗಡಿಗೆ ಬೆಂಕಿ ಬಿದ್ದ ಪರಿಣಾಮ ಅಂಗಡಿಯ ಒಳ ಭಾಗದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಇಲ್ಲಿ ಒಂದು ಗಂಟೆಗೂ ಅಧಿಕವಾಗಿ ನಂದಿಸುವ ಕಾರ್ಯದಲ್ಲಿ ತೊಡಗಿದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಕೊನೆಗೂ ಯಶಸ್ವಿಯಾಗಿವೆ. ಆದರೆ ಅಂಗಡಿಯೊಳಗಿದ್ದ ಬಹುತೇಕ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ.
ಅಂಗಡಿಯು ನಗರದ ಗಣೇಶ್‌‌ ಎಂಬುವವರಿಗೆ ಸೇರಿದ್ದಾಗಿದ್ದು, ಮಾಧ್ಯಮಗಲೊಂದಿಗೆ ಪ್ರತಿಕ್ರಿಯಿಸಿದ್ದಾರೆ. ರಾತ್ರಿ 9.30ಕ್ಕೆ ಅಂಗಡಿ ಬಾಗಿಲು ಹಾಕಿ ಮನೆಗೆ ಹೋಗಿದ್ದೆ. ಊಟ ಮಾಡಿ ಕುಳಿತಿದ್ದಾಗ ಬೆಂಕಿ ಬಿದ್ದಿರುವ ಬಗ್ಗೆ ಫೋನ್ ಬಂತು. ತಕ್ಷಣ ಬಂದು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದೆ. ಅವರು ಬಂದು ಬೆಂಕಿ ನಂದಿಸಿದರು ಎಂದಿದ್ದಾರೆ.
ಇನ್ನು ನಗರದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

http://kannada.webdunia.com/article/karnataka-news/fire-fund-in-separate-place-sufficient-assets-burnt-in-fire-115050600018_1.html

Fire cracker manufacturing unit catches fire; one charred to death

One person was charred to death and fire crackers worth Rs. 10 lakhs were destroyed when a fire cracker manufacturing unit caught fire at Chitradurga here on Tuesday night.
The deceased has been identified as Darshan (24), son of Satyanarayan, the owner of cracker unit.
According to preliminary investigations, the cracker unit caught fire owing to high temperatures and lack of ventilation facility. Though Satyanarayan claims that he had obtained licenses for the cracker unit, the officers concerned informed that the fact would be known only after verification of the documents as there is no possibility of issuing permission for cracker unit in such congested locality.
Fire extinguishers had a tough time in controlling the fire from spreading to nearby shops and after struggling for more than two and half hours they were successful. A case has been registered and further investigations are on.