Alerts,Status News an attempt by Civil Defence to Alert/Integrate Responders & Stake Holders.

Monday, August 10, 2015

F/C No :-1091/2015.. DATE :- 10-08-2015.. T.O.C :- 15:01Hrs.. ADDRS:- Pette chennappa industrial area, near Pooja kalyana mantapa, Kamakshi palya, B'lore.. N.O.F :- Fire in factory due to LPG gas leackage V.T.O :- 1 W/T from RFS sent to spot..

ಬೆಂಗಳೂರಿನಲ್ಲಿ ಅಗ್ನಿ ಆಕಸ್ಮಿಕ: ಹೊತ್ತಿ ಉರಿದ ರೂಂ ಫ್ರೆಶ್ನರ್ ಫ್ಯಾಕ್ಟರಿ!
ಬೆಂಗಳೂರು: ಮಹಾನಗರದಲ್ಲಿ ರೂಂ ಫ್ರೆಶ್ನರ್ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಕಾಮಾಕ್ಷಿಪಾಳ್ಯದಲ್ಲಿನ ರೂಂ ಫ್ರೆಶ್ನರ್ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದೆ.

ಸಿಲಿಂಡರ್ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಹಾಗೆ ಆರಂಭವಾದ ಬೆಂಕಿ ಕೆಲವೇ ಕ್ಷಣದಲ್ಲಿ ಇಡೀ ಫ್ಯಾಕ್ಟರಿಯನ್ನೇ ಆವರಿಸಿದೆ. ರೂಂ ಪ್ರೆಶ್ನರ್ ಫ್ಯಾಕ್ಟರಿಯಾಗಿದ್ರಿಂದಾಗಿ ಕೆಮಿಕಲ್‌ನಿಂದ ಬೆಂಕಿ ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಫ್ರೆಶ್ನರ್ ಬಾಟೆಲ್‌ಗಳು ಬೆಂಕಿಯ ಬಿಸಿಗೆ ಸ್ಫೋಟಗೊಂಡು ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಇಡೀ ಫ್ಯಾಕ್ಟರಿಯನ್ನು ಆವರಿಸಿಕೊಂಡಿದೆ.

ಬೆಂಕಿ ಹೊತ್ತಿಕೊಂಡ ವೇಳೆ ಫ್ಯಾಕ್ಟರಿಯಲ್ಲಿ ನೌಕರರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮೊದಲು ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರಿಂದ ಎಲ್ಲರೂ ಹೊರಗೆ ಓಡಿ ಬಂದಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಏಳು ಅಗ್ನಿಶಾಮಕ ವಾಹನಗಳಲ್ಲಿ ಬಂದು ಬೆಂಕಿ ನಂದಿಸಿದರು.

ಆದ್ರೆ ಅಷ್ಟರಲ್ಲಾಗಲೇ ಬೆಂಕಿ ಇಡೀ ಫ್ಯಾಕ್ಟರಿಯನ್ನು ಆವರಿಸಿ ಬೂದಿ ಮಾಡಿತ್ತು. ಫ್ಯಾಕ್ಟರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ಕೆನ್ನಾಲಿಗೆ ಇಡೀ ಫ್ಯಾಕ್ಟರಿಯನ್ನು ಸುಟ್ಟು ಹಾಕುತ್ತಿದ್ದರೆ ಜನರು ಏನೂ ಮಾಡಲಾಗದ ಸ್ಥಿತಿಯಲ್ಲಿ ನೋಡುತ್ತಿದ್ದರು. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

http://kannada.eenaduindia.com/State/Bangalore/2015/08/10182111/Bengaluru-Fire-accident-in-Room-Freshener-factory.vpf



































ಸುಗಂಧದ್ರವ್ಯ ಘಟಕದಲ್ಲಿ ಬೆಂಕಿ
ಬೆಂಗಳೂರು: ಕಾಮಾಕ್ಷಿಪಾಳ್ಯದ ಸುಗಂಧದ್ರವ್ಯ ತಯಾರಿಕಾ ಘಟಕದಲ್ಲಿ ಸೋಮವಾರ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಪೇಟೆ ಚನ್ನಬಸಪ್ಪ ಕೈಗಾರಿಕಾ ಪ್ರದೇಶದಲ್ಲಿರುವ ನಂದಕುಮಾರ್‌ ಎಂಬುವವರಿಗೆ ಸೇರಿದ, ಸುಗಂಧದ್ರವ್ಯ ಘಟಕ ‘ಪಾಸ್ವಾ ಇನ್‌ ಕಾರ್ಪೊರೇಷನ್‌’ನಲ್ಲಿ ಘಟನೆ ಸಂಭವಿಸಿದೆ.
ಮಧ್ಯಾಹ್ನ 3.30ರ ಸುಮಾರಿಗೆ ಘಟಕದಲ್ಲಿ ನಾಲ್ಕೈದು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಾರ್ಮಿಕರು ಘಟಕದಿಂದ ಹೊರಬಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಆರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು. ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.  ಘಟನೆಯಲ್ಲಿ ಸುಗಂಧದ್ರವ್ಯ ತಯಾರಿಕಾ ಘಟಕ ಸಂಪೂರ್ಣ ಹಾನಿಗೊಂಡಿದೆ ಎಂದು ಪೊಲೀಸರು ಹೇಳಿದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.