ಬಳ್ಳಾರಿ: ಮನೆ ಕುಸಿದು ಬಿದ್ದು ನಾಲ್ವರ ಸಾವು
- ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಮನೆ ಕುಸಿದು ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ 4 ಜನರು ಮೃತಪಟ್ಟಿದ್ದಾರೆ.
- ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ಮಣ್ಣಿನ ಮನೆ ಕುಸಿದು ಬಿದ್ದಿದ್ದು ಅವಶೇಷಗಳ ಅಡಿ ಸಿಲುಕಿಕೊಂಡಿದ್ದ ಇಬ್ಬರನ್ನು ಬದುಕಿಸಲಾಗಿದೆ.
- ಬದುಕಿ ಉಳಿದವರು ವೀರಭದ್ರಪ್ಪ ಮತ್ತು ಮಂಜುನಾಥ ಎಂದು ತಿಳಿದುಬಂದಿದೆ.
- ಅಗ್ನಿಶಾಮಕದಳದವರು ಮಣ್ಣನ್ನು ತೆರವುಗೊಳಿಸುತ್ತಿದ್ದು ಮೃತ ದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
- http://www.60secondsnow.com/3/3/77902/
ಬಳ್ಳಾರಿ, ಆಗಸ್ಟ್ 14 : ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಮನೆ ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ನಡೆಸಿದೆ. ಇಬ್ಬರು ಮಕ್ಕಳು ಸೇರಿ 4 ಜನರು ಮೃತಪಟ್ಟಿದ್ದು, ಸ್ಥಳೀಯರು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಹೂವಿನಹಡಗಲಿ ತಾಲೂಕಿನ ಮಹಾಜನದಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ಮಣ್ಣಿನ ಮನೆ ಕುಸಿದು ಬಿದ್ದಿದೆ. ಅವಶೇಷಗಳ ಅಡಿ ಸಿಲುಕಿದ್ದ ವೀರಭದ್ರಪ್ಪ ಮತ್ತು ಮಂಜುನಾಥ ಅವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮನೆಯಲ್ಲಿ ಒಟ್ಟು ಆರು ಜನರಿದ್ದರು ಬುಳ್ಳಮ್ಮ (65), ರತ್ನಮ್ಮ (25), ಈರಮ್ಮ (2) ಕುಸುಮಾ (4) ಅವರು ಅವಶೇಶಗಳ ಅಡಿ ಸಿಲುಕಿ ಮೃತಪಟ್ಟಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿ ಮಣ್ಣನ್ನು ತೆರೆವುಗೊಳಿಸುತ್ತಿದ್ದು, ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಟ್ಟಗಿ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.
Read more at: http://kannada.oneindia.com/news/bellary/4-dead-after-house-collapse-in-huvinahadagali-ballari-096103.html