Alerts,Status News an attempt by Civil Defence to Alert/Integrate Responders & Stake Holders.

Monday, February 23, 2015

Tumkuru :: NH Accident :: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ

ತುಮಕೂರು, ಫೆ.23-ಕಾರುಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಿಂದ ಹೊತ್ತಿಕೊಂಡ ಬೆಂಕಿ ಮತ್ತೊಂದು ಕಂಟೈನರ್ ತಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿ, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ನಂದಿ ಹಳ್ಳಿ ಬಳಿ  ರಾತ್ರಿ ನಡೆದಿದೆ. ಮೃತರನ್ನು ಆಕ್ಟೀವ್ ಹೋಂಡಾದಲ್ಲಿ ಹೋಗುತ್ತಿದ್ದ ನರಸಿಂಹಯ್ಯ(40) ಎಂದು ಗುರುತಿಸಲಾಗಿದ್ದು, ಇವರ ಪತ್ನಿ ಜಯಲಕ್ಷ್ಮಮ್ಮ (35) ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲತಃ ಗುಬ್ಬಿ ಬಿಳಿಗೆರೆ ಗ್ರಾಮದವರಾದ ಇವರು ಪ್ರಸ್ತುತ ಬೆಂಗಳೂರಿನ ಉಲ್ಲಾಳ ನಿವಾಸಿಗಳು ಎಂದು ಹೇಳಲಾಗಿದೆ.

ಸಂಬಂಧಿಕರು ಹಮ್ಮಿಕೊಂಡಿದ್ದ ನಾಗರಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಡರಾತ್ರಿ ಬೆಂಗಳೂರಿನ ಕಡೆಗೆ ದ್ವಿಚಕ್ರ ವಾಹನದಲ್ಲಿ ವಾಪಸ್ಸಾಗುತ್ತಿದ್ದರು. ನಂದಿಹಳ್ಳಿ ಬಳಿ ಡಾಬಾವೊಂದರಲ್ಲಿ ರಾತ್ರಿ 10ರ ಸಮಯದಲ್ಲಿ ಊಟ ಮಾಡಿ ನಂತರ 11 ಗಂಟೆಗೆ ಬೆಂಗಳೂರಿನತ್ತ ಹೊರಟಿದ್ದರು.  ಒನ್‌ವೇನಲ್ಲಿ ನುಗ್ಗಿ ಬಂದ ಕಂಟೈನರ್ ಲಾರಿ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಸುಮಾರು 600 ಮೀಟರ್ ವಾಹನವನ್ನು ಉಜ್ಜಿಕೊಂಡು ಹೋಗಿ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ  ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡು ಎರಡು ಲಾರಿಗಳಿಗೆ ಅದು ವ್ಯಾಪಿಸಿದೆ. ಘಟನಾ ಸ್ಥಳದಲ್ಲೇ ನರಸಿಂಹಯ್ಯ ಸಾವನ್ನಪ್ಪಿದರೆ, ರಸ್ತೆ ಬದಿ ಬಿದ್ದಿದ್ದ ಜಯಲಕ್ಷ್ಮಮ್ಮ ಅವರನ್ನು ಸ್ಥಳೀಯರು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಬೆಂಕಿ ಬಿದ್ದು ಲಾರಿಗಳು ಧಗಧಗ ಉರಿಯುತ್ತಿದ್ದನ್ನು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಬಂದಂತಹ 4 ಅಗ್ನಿಶಾಮಕ ವಾಹನಗಳು ಸುಮಾರು  ಹೊತ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಂತರ ಅಪಘಾತವೆಸಗಿದ ಕಂಟೈನರ್ ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿಯಾಗಿದ್ದಾರೆ. ಮತ್ತೊಂದು 36 ಚಕ್ರದ ಕಂಟೈನರ್ ಲಾರಿ ಮುಂಭಾಗ ಸಂಪೂರ್ಣ ಸುಟ್ಟುಹೋಗಿದೆ.   ಘಟನೆಯಿಂದ ತುಮಕೂರು-ಬೆಂಗಳೂರು ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್, ಡಿವೈಎಸ್ಪಿ ಜಗದೀಶ್, ಕ್ಯಾತಸಂದ್ರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್, ಎಸ್‌ಐ ಮಂಜುನಾಥ್ ಮತ್ತಿತರರು ಬೆಳಗಿನವರೆಗೂ ಅಪಘಾತಗೊಂಡ ವಾಹನಗಳನ್ನು  ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಕ್ಕಳಿಗೆ ಶಾಲೆಗೆ ಕಳುಹಿಸಬೇಕಾಗಿರುವುದರಿಂದ ನರಸಿಂಹಯ್ಯ ಭಾನುವಾರ ತಡರಾತ್ರಿಯೇ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಆದರೆ   ವಿಧಿಯಾಟಕ್ಕೆ ಬಲಿಯಾಗಿದ್ದಾರೆ ಎಂದು ಸಂಬಂಧಿಕರು ದುಃಖಿಸಿದ್ದಾರೆ.




Bangalore, phe23-cars, motor vehicle collided with a lorry filled with effect from the container to another container from the edge of the fire that occurred in one of the horrific accident killed, another seriously injured Tuesday night near the village of Nandi, the National Highway 4. The deceased was going on the Honda Active Gh.Mustfa (40) that have been identified, his wife jayalaksmamma (35) was seriously injured in Bangalore's hospital for treatment. All knob biligere village residents who are known to be present at ullala.

Nagarapuje event organized by the relatives of the two-wheeler vehicle vapassaguttiddaru at night. During the night of 10 to dabavondaralli near nandihalli after 11 pm from Mangalore to have a meal. Onvenalli into the container lorry collided with the vehicle after the outbreak of the bike is going to scuff around 600 meters from the vehicle collided with another truck. The two trucks, motor vehicle fuel tank leak, which stretches into the fire. Case Gh.Mustfa died on the spot, lying on the roadside in an ambulance to the hospital sagisiddare jayalaksmamma by them.

Uriyuttiddannu dhagadhaga shocked the public saw the fire trucks fallen in the fall. Place from 4 firefighters managed to put out the fire at vehicles as long as they carry out the operation. Apaghatavesagida Container lorry driver and cleaner fled after the incident. Another 36-wheel truck in front of the entire burned container. Bangalore-Bangalore route, traffic was stopped for a traffic incident. Laxman, who rushed to the news of the police superintendent, deputy superintendent of police Jagdish, kyatasandra Station Circle Inspector, SI Manjunath et al Dawn to allow vehicle traffic crashes clear him of vehicles. Children are sent to school on Sunday tadaratriye Gh.Mustfa opted to have their bikes in the vehicle. But vidhiyatakke duhkhisiddare relatives were killed.






A container and crane caught fire after collision on NH-4 near Nandihalli on the outskirts of Tumakuru on Sunday. The Fire and Emergency Services personnel trying to put off the fire.

The Hindu A container and crane caught fire after collision on NH-4 near Nandihalli on the outskirts of Tumakuru on Sunday. The Fire and Emergency Services personnel trying to put off the fire.
A man was killed on-the-spot and a woman sustained injuries when a container hit their two-wheeler on National Highway-4 near Nandihalli on the outskirts of Tumakuru on Sunday night.

The police said that the deceased is identified as Narasimahaiah (40) of Herur in Gubbi taluk in the district and the injured woman is Jayalakshmamma (30) of the same village.

The two-wheeler, which was going towards Bengaluru, was hit by the container coming from the opposite direction. After the accident, the driver of the container did not stop and hit a crane coming from the opposite direction at around 11.30 p.m. Due to the collision between the container and crane, the crane and container caught fire.

Four fire engines rushed to the spot to put off the fire. The accident caused a traffic jam on the national highway. It took hours for the police to clear the traffic.

The injured woman has been shifted to NIMHANS in Bengaluru.

The driver of the container is absconding.

A case has been registered in Kyatsandra police station.