ಭದ್ರಾವತಿ: ರಾಜ್ಯ ಸರಕಾರಿ ಸ್ವಾಮ್ಯದ ಪ್ರತಿಷ್ಠಿತ ಮೈಸೂರು ಕಾಗದ ಕಾರ್ಖಾನೆಯ ಪೇಪರ್ ಮೆಷಿನ್ ಘಟಕ 1 ಮತ್ತು 2ರಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದೆ.
ಈ ಅವಘಡದಲ್ಲಿ ಅಪಾರ ಮೌಲ್ಯದ ನ್ಯೂಸ್‌ಪ್ರಿಂಟ್ ಸುಟ್ಟುಹೋಗಿದ್ದು ಯಂತ್ರೋಪಕರಣಗಳಿಗೂ ಧಕ್ಕೆಯಾಗಿದೆ.ಯಾವುದೇ ರೀತಿಯ ಜೀವ ಹಾನಿಯಾಗಿಲ್ಲ . ಭದ್ರಾವತಿ ಮತ್ತು ಶಿವಮೊಗ್ಗದ ಅಗ್ನಿಶಾಮಕ ದಳದ 4 ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ದಿನಪತ್ರಿಕೆಗಳ ಮುದ್ರಣಕ್ಕೆ ಬಳಸುವ ನ್ಯೂಸ್ ಪ್ರಿಂಟ್ ಕೊನೆ ಹಂತದ ಯಂತ್ರೋಪಕರಣಗಳಿರುವ 1 ಮತ್ತು 2ನೇ ಘಟಕದ ನೆಲ ಮಹಡಿಯಲ್ಲಿ ರಾತ್ರಿ 8 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿಅನಾಹುತಕ್ಕೆ ಶಾರ್ಟ್ ಸರ್ಕ್ಯೂಟ್ ಅಥವಾ ಯಂತ್ರದ ಬೇರಿಂಗ್‌ನಿಂದ ಹೊರ ಹೊಮ್ಮುವ ಕಿಡಿಗಳು ಯಂತ್ರದ ಕೆಳಗಿನ ಪುಡಿ ಪೇಪರ್‌ಗೆ ತಗುಲಿ ಬೆಂಕಿ ಹೊತ್ತಿಕೊಂಡಿರಬಹುದೆಂದು ಅಂದಾಜಿಸಲಾಗಿದೆ. ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಬೆಂಕಿ ಕ್ಷಣ ಮಾತ್ರದಲ್ಲಿ ಎರಡೂ ಘಟಕಗಳಿಗೆ ವ್ಯಾಪಿಸಿದೆ. ವಿದ್ಯುತ್ ಸಹ ಕಡಿತಗೊಂಡಿರುವುದರಿಂದ ಆ ಭಾಗದಲ್ಲಿ ಕತ್ತಲಾವರಿಸಿದೆ. 4 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಸತತವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ರಾತ್ರಿ 10.30ರ ಹೊತ್ತಿಗೆ ಬೆಂಕಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಆದರೆ, ಘಟಕದೊಳಗಿಂದ ದಟ್ಟ ಹೊಗೆ ಬರುತ್ತಿದ್ದು ಕತ್ತಲಾವರಿಸಿರುವುದರಿಂದ ಒಳಗೆ ಹೋಗಲಾಗುತ್ತಿಲ್ಲ.
ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಬಿ.ಎಂ.ಶ್ರೀನಿವಾಸ್, ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಡಿ.ಕೆ.ಶ್ರೀನಿವಾಸ್ ಮತ್ತಿತರರು ಸ್ಥಳಕ್ಕೆ ಸ್ಥಳದಲ್ಲಿದ್ದರು. ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯ ಪೇಪರ್ ಮಿಲ್‌ನಲ್ಲಿ ಮತ್ತೆ ಬೆಂಕಿ ಅನಾಹುತ ಸಂಭವಿಸಿದ್ದು, 1 ಮತ್ತು 2 ರ ಬಿಟಿಪಿ ಸೆಲ್ಲರ್‌ನಲ್ಲಿದ್ದ ಕಾಗದ ಸುಟ್ಟು ಹೋಗಿದೆ. ಬೆಂಕಿ ನಂದಿಸಲು ಹೋದ ನೌಕರನೊಬ್ಬ ಅಸ್ವಸ್ಥಗೊಂಡಿದ್ದಾನೆ. ಬೆಂಕಿ ಅನಾಹುತದಿಂದ ಸುಮಾರು 40 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ. ಮೈಸೂರು ಕಾಗದ ಕಾರ್ಖಾನೆಯ 1, 2ನೇ ಘಟಕದಲ್ಲಿ ಸಾಂಸ್ಕೃತಿಕ ಕಾಗದ ತಯಾರಿಸಲಾಗುತ್ತದೆ. ಈ ವೇಳೆ ಉತ್ಪತಿಯಾಗುವ ಅಗಾದ ಪ್ರಮಾಣದ ಅನುಪಯುಕ್ತ ಕಾಗದವನ್ನು ಬಿಟಿಪಿ ಸೆಲ್ಲರ್‌ನ ಶುದ್ಧಗೊಳಿಸುವ ಯಂತ್ರಕ್ಕೆ ಹಾಕದೆ ಹಾಗೇ ಬಿಟ್ಟಿದ್ದರಿಂದ ಯಂತ್ರದಿಂದ ಹಾರಿದ ಕಿಡಿಯಿಂದಾಗಿ ಅಗ್ನಿ ಆಕಸ್ಮಿಕ ಸಂಭವಿಸಿದೆ ಎನ್ನಲಾಗಿದೆ. 1ನೇ ಘಟಕದಲ್ಲಿ ಹೊತ್ತಿಕೊಂಡ ಬೆಂಕಿ ಶೀಘ್ರವೇ 2ನೇ ಘಟಕಕ್ಕೂ ವ್ಯಾಪಿಸಿದೆ. ಇದರಿಂದಾಗಿ ಯಂತ್ರದಲ್ಲಿ ಕಾಗದ ಉತ್ಪಾದನೆಗೆ ಅಳವಡಿಸಲಾಗಿದ್ದ 6 ಸ್ಕ್ರೀನ್‌ಗಳು, ವಿದ್ಯುತ್ ಕೇಬಲ್‌ಗಳು, ಫೆಲ್ಟ್‌ಗಳು ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ದಳ ಬೆಂಕಿ ನಂದಿಸಿದ್ದಾರೆ. ಪ್ರತಿಭಟನೆ: ತಿಂಗಳ ಅವಧಿಯಲ್ಲಿ 3ನೇ ಬಾರಿ ಅನಾಹುತ ಸಂಭವಿಸಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನೌಕರರು ತಡ ರಾತ್ರಿ ಪ್ರತಿಭಟನೆ ನಡೆಸಿದರು.